ಐದು ಗ್ಯಾರಂಟಿ ಗಳಿಗೆ ಸರ್ಕಾರ ಷರತ್ತು ವಿಧಿಸಬಾರದು – ಟಿ.ರಾಜಶೇಖರ್
1 min read
ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ವಿವಿಧ ಹಂತದಲ್ಲಿ ಷರತ್ತುಗಳನ್ನು ವಿಧಿಸುವ ಮುಖಾಂತರ ಜಾರಿಗೆ ತರಲು ನಿರ್ಧರಿಸುವ ಮೂಲಕ ರಾಜ್ಯದ ಜನರಿಗೆ ಮಂಕುಬೂದಿ ಎರಚಿದಂತೆ ಕಾಣುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಟಿ.ರಾಜಶೇಖರ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಜ್ಯೋತಿ ಯೋಜನೆಯಡಿ ಎಲ್ಲರ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳಿದರು. ಆದರೆ ಈಗ ಅದರಲ್ಲಿ 1 ವರ್ಷದ ಹಿಂದಿನ ಸರಾಸರಿಯನ್ನು ತೆಗೆದುಕೊಂಡು ಯಾರು ಎಷ್ಟು ವಿದ್ಯುತ್‌ನ್ನು ಉಪಯೋಗಸಿದ್ದಾರೆ ಅಷ್ಟು ಯುನಿಟ್ ಉಚಿತವಾಗಿ ಉಪಯೋಗೊಸಬೇಕೆಂಬ ಷರತ್ತನ್ನು ಹಾಕಿದ್ದಾರೆ ಇದು ಸರಿಯಲ್ಲ ಎಂದರು.ನಿರುದ್ಯೋಗಿ ಪದವೀಧರ ಯುವಕರಿಗೆ 1500 ರಿಂದ 3000 ರೂ. ಭತ್ಯೆ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಈಗ ಅದಕ್ಕು ಷರತ್ತನ್ನು ಹಾಕಿ 2022-2023 ರಲ್ಲಿಉತ್ತೀರ್ಣರಾದ ಪದವೀಧರ ಯುವಕ, ಯುವತಿಯರಿಗೆ ಮಾತ್ರ ಎಂದು ಈಗ ಹೇಳಿದ್ದಾರೆ. ಆದರೆ ಅವರ ಚುನಾವಣಾ ಪೂರ್ವದ ಗ್ಯಾರಂಟಿ ಕಾರ್ಡ್ನಲ್ಲಿ ಈ ಷರತ್ತುಗಳನ್ನು ಹಾಕಿರುವುದಿಲ್ಲಾ ಎಂದರು.
2020-2021, 2021-2022 ಸಾಲಿನಲ್ಲಿ ತೇರ್ಗಡೆಯಾದ ಪದವಿದರರು ನಮಗೂ ಈ ಭತ್ಯೆ ಬರುತ್ತದೆ. ಎಂದು ಭಾವಿಸಿ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದೇವೆ. ಎಂದು ಹೇಳುತ್ತಿದ್ದಾರೆ. ಈಗ ಹಾಕಿರುವ ಈ ಷರತ್ತಿನಿಂದ ಈ ಮೇಲ್ಕಂಡ ವರ್ಷಗಳಲ್ಲಿ ತೇರ್ಗಡೆಯಾದ ನಿರುದ್ಯೋಗಿ ಪದವೀಧoರರ ಮತವನ್ನು ಹಾಕಿಸಿಕೊಂಡು ಅವರಿಗೆ ಭತ್ಯೆ ನೀಡದಿರುವುದು ಅವರಿಗೆ ಮೋಸ ಮಾಡಿದಂತೆ ಆಗಲಿಲ್ಲವೇ ಎಂದು ಪ್ರಶ್ನಿಸಿದರು.ಗ್ಯಾರಂಟಿ ಯೋಜನೆಗಳ ಜಾರಿಗೆ ಯಾವ ಆದಾಯದ ಮೂಲಗಳಿಂದ ಸಂಪನ್ಮೂಲ ಕೃಡೀಕರಿಸುತ್ತೀರಿ ಎಂದು ರಾಜ್ಯದ ಜನರಿಗೆ ಶ್ವೇತ ಪತ್ರ ಹೊರಡಿಸುವುದರ ಮೂಲಕ ತಿಳಿಸಬೇಕೆಂದು ಆಗ್ರಹಿಸಿದರು.
ಈ ಎಲ್ಲಾ ಗ್ಯಾರಂಟಿಗಳಿಗೆ ತಗುಲುವ ವೆಚ್ಚ ಸರಿದೂಗಿಸಲು ಪೆಟ್ರೋಲ್, ಡೀಸೆಲ್ ಬೆಲೆ, ಮದ್ಯದ ಬೆಲೆ, ಮುದ್ರಣ ಶುಲ್ಕದ ಮೇಲೆ ಹಾಗೂ ಪೋಲೀಸ್ ಇಲಾಖೆಯ ಮುಖಾಂತರ, ಜಮೀನಿನ ಕಂದಾಯಗಳನ್ನು ಹೆಚ್ಚಳ ಮಾಡುವ ಮುಖಾಂತರ ರಾಜ್ಯದ ಜನರಿಗೆ ಕಂದಾಯ ಮತ್ತು ಶುಲ್ಕ ಹೆಚ್ಚಳ ಮಾಡುವ ಮುಖಾಂತರ ಹಣವನ್ನು ಹೊಂದಿಸಲು ಪಿತೂರಿ ಮಾಡಿದರೀತಿಯಲ್ಲಿ ಕಾಣುತ್ತಿದೆ. ಹಾಗಾಗಿ ನೀವು ಯಾವುದೇ ರೀತಿಯ ಶುಲ್ಕ ಮತ್ತು ಕಂದಾಯವನ್ನು ಹೆಚ್ಚಳ ಮಾಡದೇ ನೀವು ನೀಡಿರುವ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.ಈ 5 ಯೋಜನೆಗಳ ಫಲಾನುಭವಿಗಳನ್ನು ಸರ್ಕಾರಿ ಕಛೇರಿಗೆ ಅಲೆದಾಡುವಂತೆ ಮಾಡಬಾರದು. ಸುಲಭದ ರೀತಿಯಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದಿನ ಸರ್ಕಾರ ಮಠ–ಮಾನ್ಯಗಳಿಗೆ, ಸಂಘ ಸಂಸ್ಥೆಗಳಿಗೆ, ನಗರದ ಅಭಿವೃದ್ಧಿಗೆ ನೀಡಿರುವ ಅನುದಾನವನ್ನು ಹಿಂಪಡೆಯಲು ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಜನರ ಅನುಕೂಲಕ್ಕಾಗಿ, ಸಂಘ ಸಂಸ್ಥೆಗಳ ಅನುಕೂಲಕ್ಕಾಗಿ ಹಿಂದಿನ ಸರ್ಕಾರ ನೀಡಿರುವ ಅನುದಾನವನ್ನು ಮುಂದುವರೆಸಬೇಕು. ಯಾವುದೇ ದ್ವೇಷದ ಭಾವನೆ ಅಥವಾ ರಾಜಕೀಯ ಉದ್ದೇಶದಿಂದ ಕೊಟ್ಟಿರುವ ಅನುದಾನವನ್ನು ರದ್ದು ಪಡಿಸಬಾರದೆಂದು ಆಗ್ರಹಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಮಧುಕುಮಾರ್ ರಾಜ್ ಅರಸ್, ಸಂತೋಷ್ ಕೋಟ್ಯಾನ್, ಎಸ್‌ಡಿಎಂ ಮಂಜು ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

