ಕತ್ತು ಸೀಳಿ ಮಹಿಳೆಯ ಭೀಕರ ಕೊಲೆ
1 min read
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಅರೆನೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರನ್ನು ಮನೆಯೊಳಗೆ ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದ ಮೃತ ದುರ್ದೈವಿ ಸಂಧ್ಯಾ (33) ಎಂದು ಗುರುತಿಸಲಾಗಿದೆ. ಮನೆಯ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಹಂತಕ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಮನೆಯ ತುಂಬಾ ರಕ್ತದ ಕಲೆಗಳು:
ಕೊಲೆಯ ಭೀಕರತೆ ಎಷ್ಟಿತ್ತೆಂದರೆ, ಬದುಕುವ ಧಾವಂತದಲ್ಲಿ ಸಂಧ್ಯಾ ಅವರು ಮನೆಯ ತುಂಬಾ ಓಡಾಡಿದ್ದು, ರಕ್ತ ಚೆಲ್ಲಾಡಿದೆ. ಗೋಡೆ ಹಿಡಿದು ಏಳಲು ಪ್ರಯತ್ನಿಸಿದ ಸಂಧ್ಯಾ ಅವರ ರಕ್ತಮಿಶ್ರಿತ ಹಸ್ತದ ಗುರುತುಗಳು ಗೋಡೆಯ ಮೇಲೆ ಮೂಡಿರುವುದು ಘಟನೆಯ ಕ್ರೌರ್ಯವನ್ನು ಸೂಚಿಸುತ್ತದೆ.
ನಾಪತ್ತೆ ಪ್ರಕರಣ ದಾಖಲಾಗಿತ್ತು:
ಸಂಧ್ಯಾ ಅವರು ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಇವರ ಬಗ್ಗೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ಸಹ ದಾಖಲಾಗಿತ್ತು. ನಿನ್ನೆ ಸಂಜೆ ಅರೆನೂರು ಗ್ರಾಮದ ಮನೆಗೆ ವಾಪಸ್ ಬಂದಿದ್ದ ಸಂಧ್ಯಾ ಅವರು ಇಂದು ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಆಲ್ದೂರು ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

