November 1, 2024

MALNAD TV

HEART OF COFFEE CITY

ಸಿಎಂ ಸಿದ್ದರಾಮಯ್ಯ ಮತಾಂತರದ ರಾಯಭಾರಿ : ಆರ್.ಅಶೋಕ್

1 min read

 

ಲವ್ ಜಿಹಾದ್ ಅಂದ್ರೆ, ಪ್ರೀತಿಸಿ ಅವರಿಗೆ ಇಷ್ಟವಾದವರನ್ನ ಮದುವೆ ಆಗ್ತಾರೆ ಎಂಬ ಲವ್ ಅಟ್ ಫಸ್ಟ್ ಸೈಟ್ ಅಲ್ಲ. ನಾನು ಹಾಗೇ ತಿಳಿದುಕೊಂಡಿದ್ದೆ. ಆದ್ರೆ, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಮತಾಂತರ ಮಾಡುವ ಲವ್ ಅಟ್ ಬ್ಯಾಕ್ ಸೈಟ್ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ. ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲವ್ ಅಟ್ ಫಸ್ಟ್ ಸೈಟ್ ಅಂದ್ರೆ, ಲವ್ ಅಟ್ ಬ್ಯಾಕ್ ಸೈಟ್ ಎಂದು ಅರ್ಥ. ಅಲ್ಲಿ ಲವ್ ಗೆ ಟ್ರೈನಿಂಗ್ ಕೊಡುತ್ತಾರೆ. ಅವರು ಅಂಗೇ ಹೋಗಿ ಲವ್ ಮಾಡಲ್ಲ. ಮೊದಲೇ ಎಲ್ಲಾ ಪ್ರಿಪೇರ್ ಮಾಡಿಕೊಂಡಿರುತ್ತಾರೆ. ಒಳ್ಳೆಯ ಬೈಕ್ ಕೊಡಿಸುತ್ತಾರೆ. ಬಾಡಿ ಬಿಲ್ಡ್ ಮಾಡಲು ಜಿಮ್ ಗೆ ಕಳಿಸುತ್ತಾರೆ. ಒಳ್ಳೆ ಬಟ್ಟೆ ಕೊಟ್ಟು ಖರ್ಚಿಗೆ ಹಣವನ್ನೂ ಕೊಡುತ್ತಾರೆ. ಎಲ್ಲಾ ಮಾಡಿ, ಹಿಂದೂ ಹುಡುಗಿಯರನ್ನ ಲವ್ ಮಾಡಿ ಅಂತ ಕಳಿಸುತ್ತಾರೆ ಎಂದರು. ನಿಜವಾದ ಲವ್ ಜಿಹಾದ್ ಅಂದ್ರೆ ಇದು. ಲವ್ ಜಿಹಾದ್ ಅಂದ್ರೆ ಲವ್ ಅಟ್ ಫಸ್ಟ್ ಸೈಟ್ ಅಲ್ಲ ಎಂದರು. ಹೀಗೆ ಮತಾಂತರ ಮಾಡಿ ದೇಶವನ್ನ ಕಪಿಮುಷ್ಠಿಯಲ್ಲಿ ಹಿಡಿಯಲು ಯತ್ನಿಸಿದ್ದರು. ಆದರೆ, ಬಿಜೆಪಿ ಸರ್ಕಾರ ಎಲ್ಲವಕ್ಕೂ ಬಾಗಿಲು ಹಾಕಿತ್ತು. ಈಗ ಕಾಂಗ್ರೆಸ್ ಸರ್ಕಾರ ಗೇಟ್ ಓಪನ್ ಮಾಡಿ ಮುಕ್ತ ಅವಕಾಶ ನೀಡಿದೆ ಎಂದರು. ಇದೇ ವೇಳೆ, ಮತಾಂತರಕ್ಕೆ ಸಿಎಂ ಸಿದ್ದರಾಮಯ್ಯನವರೇ ರಾಯಭಾರಿ ಎಂದು ಸಿಎಂ ಸಿದ್ದು ವಿರುದ್ಧ ವ್ಯಂಗ್ಯವಾಡಿದ್ದಾರೆ. ಮತಾಂತರವಾದರೆ ಕಾಂಗ್ರೆಸ್ಸಿಗೆ ಮತ ಬೀಳುತ್ತೆ. ಹಾಗಾಗಿ, ಮತಾಂತರಕ್ಕೆ ಸಿದ್ದರಾಮಯ್ಯ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ ಹಿಂದೂಗಳು, ನಾಮ, ಕುಂಕುಮ ಕಂಡರೆ ಆಗಲ್ಲ. ಹಾಗಾದ್ರೆ, ನಮ್ಮ ಪಕ್ಕ ಹಾಗೂ ಎದುರಿನ ಮನೆಯ ಅಮರನಾಥ್ ಅಬ್ದುಲ್ ಘನಿ ಆಗ್ಬೇಕಾ ಎಂದು ಪ್ರಶ್ನಿಸಿದ್ದಾರೆ. ಬ್ರಿಟಿಷರು ಕೂಡ ಈ ದೇಶ ನಮ್ಮ ಕೈನಲ್ಲಿ ಉಳಿಯಬೇಕು ಅಂದ್ರೆ ಮತಾಂತರ ಆಗಬೇಕು ಎಂದಿದ್ದರು. ಬಾಬರ್, ಔರಂಗಜೇಬ್ ಕೂಡ ಈ ದೇಶ ನಮ್ಮ ಕೈಗೆ ಬರಬೇಕಾದ್ರೆ ಎಲ್ಲರೂ ಮುಸ್ಲಿಂ ಆಗಬೇಕು ಎಂದಿದ್ದರು. ಅದಕ್ಕೆ ಸಾಕ್ಷಿ ಇಲ್ಲೇ ಇದ್ದಾರೆ ನೋಡಿ, ಕೆ.ಜಿ.ಬೋಪಯ್ಯನವರು ಎಂದರು. ಬೋಪಯ್ಯ ಅಂದ್ರೆ ಬೋಪಯ್ಯನವರನ್ನ ನೋಡಬೇಡಿ. ಅವರಲ್ಲ ಮಾಡಿದ್ದು. ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಮತಾಂತರ ಮಾಡಿದ್ದ. ಈಗ ಸಿದ್ದರಾಮಯ್ಯ ಟಿಪ್ಪುವಿನ ರಾಯಭಾರಿ ಆಗಲು ಹೊರಟಿದ್ದಾರೆ ಎಂದು ಸಿದ್ದು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!