ಚಿಕ್ಕಮಗಳೂರು ಶಾಸಕ ಎಚ್ ಡಿ ತಮ್ಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ಗಿಳಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್
1 min readಹೊಸ ಅನುದಾನವನ್ನು ತಂದು ಕೇತ್ರವನ್ನು ಅಭಿವೃದ್ಧಿ ಪಡಿಸಲು ಸಾಮರ್ಥ್ಯ ಇಲ್ಲದೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ಈ ಹಿಂದೆ ಮಂಜೂರಾಗಿದ್ದ ಪ್ರಸಿದ್ಧ ಚಂದ್ರದ್ರೋಣ ಪರ್ವತದ ದತ್ತಾತ್ರೇಯ ಪೀಠದ ಧಾರ್ಮಿಕ ಪ್ರವಾಸಿ ತಾಣ ಗಾಳಿ ಕೆರೆಯ ಭೀಮಗಾಧ ತೀರ್ಥ ಸೇರಿದಂತೆ 17 ಕಾಮಗಾರಿಗಳನ್ನು ಬದಲಾವಣೆ ಮಾಡುವ ಮೂಲಕ ಕ್ಷೇತ್ರಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಆರೋಪಿಸಿದ್ದಾರೆ
ಈ ಕುರಿತು ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು ಗಾಳಿ ಕೆರೆಯ ಭೀಮಗಾಧ ತೀರ್ಥ ಸೌಂದರ್ಯೀಕರಣ, ಕವಿಕಲ್ ಗಂಡಿಯಲ್ಲಿ ಆಂಜನೇಯ ಸ್ವಾಮಿ ಪ್ರತಿಷ್ಠಾಪನೆ ಚಿಕ್ಕಮಗಳೂರಿನ ಗೃಹ ಮಂಡಳಿ ಬಡಾವಣೆಯ ಸಮೀಪದ ಹುಣಸೆಹಳ್ಳಿ ಕೆರೆಯ ಪಕ್ಕದ ಈಶ್ವರ ದೇವಾಲಯದ ಜೀರ್ಣೋದರ ಸೇರಿದಂತೆ ಒಟ್ಟು 17 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಈ ಹಿಂದೆ ನಮ್ಮ ಪಕ್ಷದ ಶಾಸಕರು ಹಾಗೂ ಸಚಿವರು ಆಗಿದ್ದ ಡಾ. ಸಿಟಿ ರವಿ ಅವರ ಶ್ರಮದಿಂದ ಸರ್ಕಾರ ಅನುದಾನವನ್ನು ಮಂಜೂರು ಮಾಡಿತ್ತು ಎಂದು ಹೇಳಿದರು
ದಿನದಿಂದ ದಿನಕ್ಕೆ ದತ್ತಾತ್ರೇಯ ಪೀಠ ಮತ್ತು ಮತ್ತು ಪಕ್ಕದಲ್ಲಿರುವ ಗಾಳಿಕೆರೆಯ ಭೀಮ ಗಾಧ ತೀರ್ಥ ಪ್ರವಾಸಿಗರನ್ನು ಸೂಜುಗಲ್ಲಿನಂತೆ ಆಕರ್ಷಿಸುವುದನ್ನು ಗಮನದಲ್ಲಿಟ್ಟುಕೊಂಡು ಸಿಟಿ ರವಿ ಅವರು 3 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು 2 ರೂಗಳ ವೆಚ್ಚದಲ್ಲಿ ವೀಕ್ಷಣಾ ಗೋಪುರ ಮತ್ತು ತಡೆಗೋಡೆ ನಿರ್ಮಾಣ , ಕಲ್ಲಿನ ಬೆಂಚು, ಪಾಂಡವರ ವನವಾಸ ನೆನಪಿಸುವ ಶಿಲ್ಪಗಳ ನಿರ್ಮಾಣ ಹಾಗೂ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒಂದು ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಮಂಜೂರು ಮಾಡಲಾಗಿತ್ತು ಆದರೆ ಆ ಕಾಮಗಾರಿಗಳನ್ನು ಬದಲಾಯಿಸಲು ಶಾಸಕ ಎಚ್ ಡಿ ತಮ್ಮಯ್ಯ ಅವರು ಈ ತಿಂಗಳ 12 ರಂದು ಪ್ರವಾಸೋದ್ಯಮ ಇಲಾಖೆಗೆ ಪತ್ರ ನೀಡಿ ಕಾಮಗಾರಿಯನ್ನು ಬದಲಾವಣೆ ಮಾಡುವ ಮೂಲಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸಿದರೆ ಎಂದು ವಾಗ್ದಾಳಿ ನಡೆಸಿದರು
ಹೊಸದಾಗಿ ಅನುದಾನ ತಂದು ಕ್ಷೇತ್ರದಲ್ಲಿ ಕೆಲಸ ಮಾಡಿ ಯೋಗ್ಯತೆ ಹಾಗೂ ದಕ್ಷತೆಯನ್ನು ಪ್ರದರ್ಶಿಸಿ ಅದನ್ನು ಬಿಟ್ಟು ಯಾರೋ ತಂದಿದ್ದ ಅನುದಾನದ ಕಾಮಗಾರಿಗಳನ್ನು ಬದಲಾವಣೆ ಮಾಡುವ ಮೂಲಕ ಶಾಸಕ ಬದುಕಿದ್ದಾನೆ ಎಂದು ತೋರಿಸುವ ಮತ್ತು ಯಾರದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡುಲು ಪ್ರಯತ್ನಿಸಬೇಡಿ. ಕಾಮಗಾರಿಯನ್ನು ಬದಲಾವಣೆ ಮಾಡದೆ ಹಿಂದೆ ಮಂಜೂರಾಗಿದ್ದ ಕಾಮಗಾರಿಯನ್ನೆ ಕೈಗೊಳ್ಳಿ ಎಂದು ಒತ್ತಾಯಿಸಿದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g