ಸರ್ಕಾರದ ಖಾತೆಯಲ್ಲಿ ಹಣವೇ ಇಲ್ಲ. ಕಾಫಿನಾಡಲ್ಲಿ ಸರ್ಕಾರದ ಚೆಕ್ ಬೌನ್ಸ್.
1 min read
ಅತಿವೃಷ್ಠಿಯ ಪರಿಹಾರಕ್ಕಾಗಿ ತಹಶೀಲ್ದಾರ್ 1 ಲಕ್ಷದ 20 ಸಾವಿರ ಹಣದ ಚೆಕ್ ನೀಡಿದ್ದು, ಹಣ ಬಿಡಿಸಲು ಹೋದಾಗ ಸರ್ಕಾರದ ಖಾತೆಯಲ್ಲಿ ಹಣವಿಲ್ಲ ಎಂದು ಫಲಾನುಭವಿಯನ್ನು ವಾಪಸ್ ಕಳುಹಿಸಿರುವ ಘಟನೆ ಕಳಸ ತಾಲ್ಲೂಕಿನಲ್ಲಿ ನಡೆದಿದೆ.
ಕಳೆದ ಬಾರಿ ರಾಜ್ಯಾದ್ಯಂತ ಭಾರಿ ಮಳೆಯಾಗಿದ್ದು ಮಳೆಯಿಂದಾಗಿ ಅನೇಕರು ಸೂರಿನ ಜೊತೆಗೆ ಪ್ರಾಣವನ್ನು ಕಳೆದು ಕೊಂಡಿದ್ದರು. ಇದೇ ರೀತಿ ಭಾರೀ ಮಳೆಗೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಲಕ್ಷ್ಮಣ್ ಮನೆ ಬಿದ್ದು ಲಕ್ಷ್ಮಣ್ ಪತ್ನಿಗೆ ಗಂಭೀರ ಗಾಯವಾಗಿತ್ತು.
ಪರಿಹಾರಕ್ಕಾಗಿ ಲಕ್ಷಣ್ ಬದಲಾದ ಮೂರು ತಹಶೀಲ್ದಾರ್ ಗೆ ಮೂರ್ಮೂರು ಬಾರಿ ಮನವಿ ಮಾಡಿ ಚಿಕಿತ್ಸೆಗಾಗಿ ಖಾಸಗಿ ಫೈನಾನ್ಸ್ ನಲ್ಲಿ ಸಾಲ ಮಾಡಿ ಪತ್ನಿಯನ್ನ ಉಳಿಸಿಕೊಂಡಿದ್ದರು.
ನಂತರ ಅಧಿಕಾರಿಗಳು 20 ಸಾವಿರ ಹಣ ನೀಡಿದ್ರೆ 1 ಲಕ್ಷ ಹಣ ಸಿಗುತ್ತೆ ಎಂದು ಲಂಚಕ್ಕೆ ಬೇಡಿಕೆ ಒಡ್ಡಿ 2024ರ ಜುಲೈ 27 ರಂದು ಕಳಸ ತಹಶೀಲ್ದಾರ್ ಫಲಾನುಭವಿ ಪರಿಹಾರವಾಗಿ ಲಕ್ಷಣ್‌ಗೆ 1 ಲಕ್ಷದ 20 ಸಾವಿರ ಹಣದ ಚೆಕ್ ನೀಡಿದ್ದರು.
ಲಕ್ಷಣ್ ಹಣ ಬಿಡಿಸಲು ಹೋದಾಗ ಬ್ಯಾಂಕ್ ಸಿಬ್ಬಂದಿ ತಹಶೀಲ್ದಾರ್ ಕೊಟ್ಟ ಚೆಕ್ಕಿಗೆ, ಸರ್ಕಾರದ ಖಾತೆಯಲ್ಲೇ 6 ತಿಂಗಳಿಂದ ಹಣವೇ ಇಲ್ಲ ಎಂದು ಹೇಳಿರುದನ್ನು ಕೇಳಿ ನೀರಾಸೆಗೊಂಡು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g