ಅಮ್ಮನನ್ನ ಕೊಂದು ಸುಟ್ಟ ಪಾಪಿ ಮಗ ಅಪ್ಪನ ಮೇಲೂ ತೋರಿದ್ದ ಮೃಗಿಯ ವರ್ತನೆ
1 min read
ಚಿಕ್ಕಮಗಳೂರು : ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಅಮ್ಮನನ್ನ ಕೊಂದು ಸುಟ್ಟು ಹಾಕಿದ್ದ ಪಾಪಿ ಪುತ್ರ ಪವನ್ ತಿಂಗಳ ಹಿಂದೆ ಅಪ್ಪನ ಮೇಲೂ ತೋರಿದ್ದ ಮೃಗಿಯ ವರ್ತನೆ. ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ಅಪ್ಪ-ಅಮ್ಮನ ಜೊತೆ ವಾಸವಿದ್ದ ಕೊಲೆ ಆರೋಪಿ ಪವನ್ ಕಳೆದ ರಾತ್ರಿ ಕುಡಿದು ಬಂದು 52 ವರ್ಷದ ತಾಯಿ ಭವಾನಿ ಜೊತೆ ಗಲಾಟೆ ಮಾಡಿ ಅಮ್ಮನನ್ನ ಕೊಂದು ಮನೆಯಲ್ಲೇ ಸುಟ್ಟಿ ಹಾಕಿದ್ದನು. ತಾಯಿಯ ದೇಹ ಬೆಂಕಿಯಲ್ಲಿ ಬೇಯ್ಯುವಾಗ ಕುಡಿದ ಮತ್ತಿನಲ್ಲಿ ಪಕ್ಕದಲೇ ಮಲಗಿದ್ದ ಪಾಪಿ ಮಗ. ಅಪ್ಪನಿಂದ ವಿಷಯ ತಿಳಿದು ಸ್ಥಳಿಯರು ಬೆಂಕಿ ನಂದಿಸಿದ್ದರು. ಅಷ್ಟರಲ್ಲಿ ಹೆತ್ತು-ಹೊತ್ತು ಸಾಕಿದ ಮಗನೇ ಅಮ್ಮನ ಪ್ರಾಣ ತೆಗೆದಿದ್ದ. ಸ್ಥಳಕ್ಕೆ ಬಂದ ಆಲ್ದೂರು ಪೊಲೀಸರು ಅರ್ಧಂಬರ್ಧ ಸುಟ್ಟ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ತಂದು ಪಾಪಿ ಪುತ್ರ ಪವನ್ ನನ್ನ ಬಂಧಿಸಿದ್ದರು. ಕಳೆದೊಂದು ತಿಂಗಳ ಹಿಂದೆ ಕುಡಿದು ಬಂದಿದ್ದ ಪವನ್ ಅಪ್ಪನ ಮೇಲೂ ಮೃಗೀಯ ವರ್ತಮೆ ತೋರಿ ಲೆದರ್ ಬೆಲ್ಟ್ ನಿಂದ ಅಪ್ಪನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದ. ಅಪ್ಪನ ಬೆನ್ನಿನ ಚರ್ಮ ಸುಲಿಯುವಂತೆ ಹೊಡೆದಿದ್ದ. ನಿತ್ಯ ಕೂಲಿ ಕೆಲಸ ಮಾಡೋದು ಸಂಜೆ ಕುಡಿದು ಬಂದು ಅಪ್ಪ-ಅಮ್ಮನನ್ನ ಹೊಡೆಯೋದು ಇವನ ಕಾಯಕವಾಗಿತ್ತು. ಹೆತ್ತವರು ಕೂಡ ಮಗನೆಂಬ ಮಮಕಾರದಿಂದ ಪೊಲೀಸರಿಗೂ ದೂರು ನೀಡಿರಲಿಲ್ಲ. ಯಾರಿಗೂ ಹೇಳಿರಲಿಲ್ಲ. ಆದರೆ, ವಿಷಯ ತಿಳಿದ ಸ್ಥಳಿಯರು ಕೊಲೆ ಆರೋಪಿ ಪವನ್ ಗೆ ಬುದ್ದಿವಾದ ಹೇಳಿದ್ದರು. ಆದರೂ, ಕುಡಿದು ಅಪ್ಪ-ಅಮ್ಮನಿಗೆ ಹೊಡೆಯುತ್ತಿದ್ದ ಮಗ ಕೊನೆಗೊಂದು ದಿನ ಅಮ್ಮನನ್ನ ಕೊಂದು ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

