ಕಾಫಿ ಡೇ ಮಾಲಿಕ ಸಿದ್ದಾರ್ಥ ಹೆಗಡೆ ಅಜರಾಮರ.
1 min read
ಕಾಫಿ ಡೇ ಮಾಲಿಕ ಸಿದ್ದಾರ್ಥ್ ಹೆಗಡೆ ಮರಣ ಹೊಂದಿ ಏಳು ವರ್ಷ ಕಳೆದರೂ ನಾಡಿನ ಜನರ ಮನಸ್ಸಿನಲ್ಲಿ ಇನ್ನೂ ಅಜರಾಮರವಾಗಿ ಉಳಿದಿದ್ದಾರೆ.
ಮೂಲತಃ ಕಳಸ ತಾಲೂಕಿನ ಹೆಬ್ಬಾಳ ಸೇತುವೆ ಸಮೀಪದ ಅಣ್ಣ ತಂಗಿ ವಿನಯ್ ವೀಣಾ ಕುಂಚದಲ್ಲಿ ಪುಟ್ಟ ಗ್ರಾಮದಲ್ಲಿ ಅರಳಿದ ಸಿದ್ದಾರ್ಥ್ ವಿಶ್ವಕ್ಕೆ ಪರಿಚಯ ವಾಗುವ ರೀತಿಯಲ್ಲಿ ಬದುಕಿದ್ದರು.
ಕಾಫಿ ಡೇ ಕಿಂಗ್ ಎಂದೆ ಪ್ರಸಿದ್ಧರಾಗಿದ್ದ ಸಿದ್ದಾರ್ಥ್ ಅವರ ಕೆಫೆ ಕಾಫಿ ಡೇ ಇಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ವಿಶ್ವ ಭೂಪಟದಲ್ಲಿ ಗುರುತಿಸುವಂತಾಯಿತು. ವಿಶ್ವದ ಹಲವು ದೇಶಗಳಲ್ಲಿ ಕಾಫೀಡೆ ತೆರೆದು ಚಿಕ್ಕಮಗಳೂರಿನ ಕಾಫಿಯ ಘಮವನ್ನು ಎಲ್ಲೆಡೆ ಪಸರಿಸಿದ್ದರು.
ಅನೇಕ ಯುವಕರಿಗೆ ಉದ್ಯೋಗ ನೀಡಿ ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾಗಿದ್ದ ಸಿದ್ದಾರ್ಥ್ ಕಾರಣಾಂತರಗಳಿಂದ ಧರ್ಮಸ್ಥಳ ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ಸತ್ತು ಏಳು ವರ್ಷ ಕಳೆದರೂ ಮಲೆನಾಡಿಗರ ಮನಸಲ್ಲಿ ಮಾಸದೆ ಚಿರಸ್ಥಾಯಿ ಯಾಗಿ ಉಳಿದಿರುವ ಸಿದ್ದಾರ್ಥ್ ಗೆ ಅವರ ಅಭಿಮಾನಿಗಳು ಹಾಗೂ ಮಲೆನಾಡಿಗರು ಕಾಫಿ ಹಣ್ಣಿನಲ್ಲಿ ಸಿದ್ದಾರ್ಥ್ ಭಾವಚಿತ್ರ ಬರೆದು ನಮನ ಸಲ್ಲಿಸಿ ಕಾಫಿ ಹಣ್ಣಲ್ಲಿ ಅರಳಿದ ಸಿದ್ದಾರ್ಥ್ ಕಂಡು ಅವರ ನೆನಪನ್ನು ಮೆಲುಕು ಹಾಕಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g