ನಡು ರಸ್ತೆಯಲ್ಲೇ ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ರೌಡಿಶೀಟರ್ ಕೌಶಿಕ್ ಅಟ್ಯಾಕ್
1 min read
ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿ ರೌಡಿಶೀಟರ್ ಓರ್ವ ಸಿಕ್ಕಸಿಕ್ಕವರಿಗೆ ಚಾಕು ಇರಿದಿದ್ದಾನೆ ಸ್ಥಳಕ್ಕೆ ಬಂದ ಪೊಲೀಸರ ಮೇಲು ಚಾಕು ಚುಚ್ಚಲು ಯತ್ನಿಸಿದ್ದಾನೆ
ರಾಡು, ಡ್ರ್ಯಾಗರ್ ನಿಂದ ಚುಚ್ಚಿ ನಡು ರಸ್ತೆಯಲ್ಲಿ ರಂಪಾಟ ಮಾಡಿದ್ದು ನಗರದ ಬೇಲೂರುಹಿರೇಮಗಳೂರು ರಸ್ತೆಯಲ್ಲಿ ಘಟನೆ ನಡೆದಿದೆ ಎಣ್ಣೆ ಹಾಗೂ ಗಾಂಜಾ ಮತ್ತಿನಲ್ಲಿ ಸಿಕ್ಕಸಿಕ್ಕ ವರಿಗೆ ಚಾಕು ಹಾಕಲು ಮುಂದಾದ ವ್ಯಕ್ತಿಯನ್ನು ವಶಕ್ಕೆ ಪಡೆಯಲು
ಸ್ಥಳಕ್ಕೆ ಬಂದ ಪೊಲೀಸರ ಮೇಲು ಚಾಕು ಹಾಗೂ ರಾಡಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇವನ ರಂಪಾಟಕ್ಕೆ ಅಸಹಾಯಕರಾಗಿ ಪೊಲೀಸರು ನಿಲ್ಲುವ ಸ್ಥಿತಿ ಉಂಟಾಗಿತ್ತು. ಈತನನ್ನು ಸಗಣಿಪುರದ ಕಿರಿಕ್ ಕೌಶಿಕ್ ಎನ್ನಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಬೈಪಾಸ್ ರಸ್ತೆಯಲ್ಲಿ ಕೆಲಕಾಲ ಆತಂಕ ಮೂಡಿತ್ತು. ಕೌಶಿಕ್ ನ ರಂಪಾಟಕ್ಕೆ ಪೊಲೀಸರೇ ದಂಗು ಬಡಿದಂತೆ ಸುಮ್ಮನಿರಬೇಕಾಯಿತು.
ಸಾರ್ವಜನಿಕರ ಕರೆ ಮೇರೆಗೆ ವಶಕ್ಕೆ ಪಡೆಯಲು ಬಂದ ನಗರ ಪೊಲೀಸ್ ಠಾಣೆಯ ಎಎಸ್ಐ ಕುಮಾರಸ್ವಾಮಿ ವಿರುದ್ಧವೇ ಚಾಕುವಿನಿಂದ ದಾಳಿಗೆ ಈತ ಯತ್ನುಸಿದ್ದಾನೆ. ಕೊನೆಗೆ ವಶಕ್ಕೆ ಪಡೆದರೂ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಹೋಗಲು ಸಹಾ ಯತ್ನಿಸಿದ್ದು ಕೆಲಕಾಲ ಹೆದ್ದಾರಿಯಲ್ಲಿ ಗಾಬರಿಗೊಂಡ ಜನರು ಇವನ ರಂಪಾಟ ನೋಡುತ್ತಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g