ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಅತ್ಯಾಪರೂಪದ ಹಾವು ಸೆರೆ
1 min read
ಚಿಕ್ಕಮಗಳೂರು.: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಕಾಳಿಂಗ ಸರ್ಪಗಳೇ ಹೆಚ್ಚು. ಆದರೆ, ಕಾಫಿನಾಡ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಅತ್ಯಾಪರೂಪ ಎಂಬಂತೆ ಮಲಬಾರ್ ಪಿಟ್ ವೈಫರ್ ಹಾವು ಪತ್ತೆಯಾಗಿದೆ. ಈ ಮಲಬಾರ್ ಪಿಟ್ ವೈಫರ್ ಉರಗ ಸಂತತಿಯಲ್ಲೇ ಅಪರೂಪದ ಉರಗ. ಕೇವಲ ಮೂರೇ ಮೂರು ಅಡಿ ಬೆಳೆಯುವ ಈ ಮಲಬಾರ್ ಪಿಟ್ ವೈಫರ್ ಹಾವು ತನ್ನ ಇಡೀ ಜೀವಿತಾವಧಿಯಲ್ಲೂ ಅಷ್ಟೇ ಉದ್ದ ಇರಲಿದೆ. ಮತ್ತೆ ಬೆಳೆಯುವುದಿಲ್ಲ. ನೋಡಲು ಅತ್ಯಂತ ಸುಂದರವಾಗಿರೋ ಈ ಹಾವು ದಪ್ಪವಾಗುತ್ತೋ ವಿನಃ ಉದ್ದವಾಗುವುದಿಲ್ಲ. ಅಂತಹಾ ಉರಗ ಸಂತತಿಯ ಅಪರೂಪದ ಉರಗ ಪಶ್ಚಿಮ ಘಟ್ಟಗಳ ತಪ್ಪಲಿನ ಕಳಸ ತಾಲೂಕಿನ ಬೇಡಕ್ಕಿ ಗ್ರಾಮದಲ್ಲಿ ಸೆರೆಯಾಗಿದೆ. ಇನ್ನುಉರಗ ಸಂತತಿಯಲ್ಲೇ ಈ ಪಿಟ್ ವೈಫರ್ ಸೂಕ್ಷ್ಮಾತಿಸೂಕ್ಷ್ಮ ಹಾವು.ಇದರ ವಿಷ ಮಾರಣಾಂತಿಕ ಅಲ್ಲದಿದ್ದರೂ ತೀವ್ರ ನೋವಾಗುವುದರ ಜೊತೆ ಕೈಕಾಲು ಊದಿಕೊಳ್ಳುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಕಚ್ಚಿದ ಜಾಗ ಗ್ಯಾಂಗ್ರಿನ್ ಆಗಿ ಕೊಳೆಯುತ್ತಾ ಬರುತ್ತದೆ. ಈ ಮಲಬಾರ್ ಪಿಟ್ ವೈಫರ್ ಹಾವನ್ನ ಉರಗತಜ್ಞ ರಿಜ್ವಾನ್ ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

