ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಆರು ತಿಂಗಳ ಬಳಿಕ ಮನೆಗೆ ಎಂಟ್ರಿ
1 min read
ಚಿಕ್ಕಮಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು 6 ತಿಂಗಳ ಬಳಿಕ ಮನೆ ಸೇರಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದ ನರಸಿಂಹಮೂರ್ತಿ ಹಾಗೂ ಕುಟುಂಬ ಕುಂಭಮೇಳಕ್ಕೆ ತೆರಳಿದ್ದರು. ಅಪಾರ ಜನ ಸಂದಣಿ ನಡುವೆ ನರಸಿಂಹಮೂರ್ತಿ ಜನವರಿ 28ರಂದು ನಾಪತ್ತೆಯಾಗಿದ್ದರು. ಹೀಗಾಗಿ ನರಸಿಂಹಮೂರ್ತಿಯವರಿಗೆ ಅವರ ಪುತ್ರ ಬದರೀನಾಥ್ ನಾಲ್ಕುದಿನ ಹುಡುಕಾಟ ನಡೆಸಿದ್ದರು ಆದರೂ ಪತ್ತೆಯಾಗಿರಲಿಲ್ಲ ಹೀಗಾಗಿ ಊರಿಗೆ ವಾಪಸ್ಸಾಗಿ ಕುಟುಂಬವನ್ನು ಊರಲ್ಲಿ ಬಿಟ್ಟು ಮತ್ತೆ ಪ್ರಯಾಗ್‌ರಾಜ್ ಗೆ ಹೋಗಿ ಹುಡುಕಾಟ ನಡೆಸಿದ್ದರು. ಆದರೂ ನರಸಿಂಹಮೂರ್ತಿ ಪತ್ತೆಯಾಗಿರಲಿಲ್ಲ. ಮುಂಬೈನ ಶಾರದಾ ರಿಹ್ಯಾಬಿಲಿಟೇಶನ್ ಸಂಸ್ಥೆಯ ಆಶ್ರಯ ಪಡೆದಿದ್ದ ನರಸಿಂಹಮೂರ್ತಿಯವರನ್ನು ಸಂಸ್ಥೆಯವರೆ ಮರಳಿ ಮನೆಗೆ ಸೇರಿಸಿದ್ದಾರೆ. ಹೀಗಾಗಿ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ಹಲವರನ್ನು ವಿವಿಧ ಸಂಘ ಸಂಸ್ಥೆಗಳು ಆಶ್ರಯ ನೀಡಿ ಮರಳಿ ಮನೆಗೆ ತಲುಪಿಸುವ ಕೆಲಸ ಮಾಡಿವೆ ಇದ್ರಲ್ಲಿ ಚಿಕ್ಕಮಗಳೂರಿನ ಒಬ್ಬರು ಮರಳಿ ಮನೆಗೆ ಸೇರಿರುವುದಕ್ಕೆ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g