ಕಾಫಿನಾಡಲ್ಲಿ ಲವ್ ಜಿಹಾದ್ ಕೇಸ್.!
1 min read
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಲ್ಲಿ ಲವ್ ಜಿಹಾದ್ ಪ್ರಕರಣವೊಂದು ಬೆಳಕಿನ ಬಂದಿದೆ. ಅಪ್ರಾಪ್ತ ಬಾಲಕಿಯನ್ನು ಅಫ್ರೋಜ್ ಎಂಬ ಯುವಕ ಅಪಹರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ದಂದೂರು ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ 17 ವರ್ಷದ ಯುವತಿಯನ್ನು ಪ್ರೀತಿ ಹೆಸರಲ್ಲಿ ಅಫ್ರೋಜ್ ಕರೆದೊಯ್ದಿದ್ದಾನೆ. ಯುವತಿ ಪೋಷಕರಿಗೆ ಅಫ್ರೋಜ್ ಜೊತೆ ಓಡಾಡುತ್ತಿರುವ ಮಾಹಿತಿ ತಿಳಿದು ಮೂರು ತಿಂಗಳ ಹಿಂದೆ ಕಾಲೇಜು ಬಿಡಿಸಿ ಯುವತಿಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೆ ಸಂಬಂಧಿಕರು ಸಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಅಪ್ರಾಪ್ತ ಯುವತಿಯನ್ನು ಅಫ್ರೋಜ್ ಅಪಹರಣ ಮಾಡಿದ್ದಾನೆಂದು ಆರೋಪಿಸಿ ಯುವತಿ ಪೋಷಕರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಫ್ರೋಜ್ ನನ್ನು ಬಂಧಿಸಿದ್ದಾರೆ. ಇಂದು ಪೊಲೀಸರು ಅಫ್ರೋಜ್ ನನ್ನು ಚಿಕ್ಕಮಗಳೂರು ಪೋಕ್ಸೋ ಕೋರ್ಟ್ ಗೆ ಹಾಜರು ಪಡಿಸುವ ಸಾಧ್ಯತೆ ಇದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g