ಎಕ್ಸ್ ನಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಾಲೆಳೆದ ಜೆಡಿಎಸ್…!
1 min read
ಚಿಕ್ಕಮಗಳೂರು : ಮೂರು ವರ್ಷಗಳ ಬಳಿಕ ಯಾವ ಪಕ್ಷದಿಂದ ಸ್ಪರ್ಧಿಸುತ್ತೇನೋ ಗೊತ್ತಿಲ್ಲ ಎಂದು ಹೇಳಿರೋ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನ ಮೋಟಮ್ಮ ವಿರುದ್ಧ ಜೆಡಿಎಸ್ ಟ್ವಿಟ್ ಮಾಡಿ ಕಾಂಗ್ರೆಸ್ ಕಾಲೆಳೆದಿದೆ. ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರೇ ಸುಮ್ಮನೇ ಟೈಮ್ ವೇಸ್ಟ್ ಮಾಡಬೇಡಿ. ಕಾಂಗ್ರೆಸ್ ಶಾಸಕರಿಗೇ ಕಾಂಗ್ರೆಸ್ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಅದಕ್ಕೆ ಶಾಸಕಿ ನಯನ ಮೋಟಮ್ಮ ಅವರ ಮಾತುಗಳೇ ಸಾಕ್ಷಿ. ಹಾಗಾಗಿ,ಕಮಿಷನ್ ಮುಕ್ತ ಕರ್ನಾಟಕ, ಭಯ ಮುಕ್ತ ಸಶಕ್ತ ಹಾಗೂ ಸಮೃದ್ಧ ಕರ್ನಾಟಕ ನಿರ್ಮಿಸೋದ್ರ ಜೊತೆ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಎನ್.ಡಿ.ಎ.ಮೈತ್ರಿ ಕೂಟ ಬೆಂಬಲಿಸಿ. 2028ರಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುನ್ನುಡಿ ಬರೆಯೋದು ಗ್ಯಾರಂಟಿ. ಅದಕ್ಕಾಗಿ, ಕಾಂಗ್ರೆಸ್ ಶಾಸಕರು-ಕಾರ್ಯಕರ್ತರೇ ಸಮಯ ವ್ಯರ್ಥ ಮಾಡಬೇಡಿ ಈಗಲೇ ಎಚ್ಚೆತ್ತುಕೊಳ್ಳಿ ಎಂದು ಎಕ್ಸ್ ನಲ್ಲಿ ನಯನ ಮೋಟಮ್ಮ ಹಾಗೂ ಕಾಂಗ್ರೆಸ್ ಕಾಲೆಳೆದಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g

