ಕಾಲು ಹಿಡಿದು ಕ್ಷಮೆ ಕೇಳದಿದ್ದರೆ ಕೈ ಕಾಲ್ ಕಟ್ ಮಾಜಿ ಮಂತ್ರಿಗೆ ಪ್ರಾಣ ಬೆದರಿಕೆ ಪತ್ರ
1 min read
ಚಿಕ್ಕಮಗಳೂರು: ಅನಾಮಧೇಯ ವ್ಯಕ್ತಿಯಿಂದ ಎಂ ಎಲ್ ಸಿ ಸಿ ಟಿ ರವಿಗೆ ಬೆದರಿಕೆ ಪತ್ರ ಬಂದಿದ್ದು ಸದ್ಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಅನಾಮಧೇಯ ವ್ಯಕ್ತಿಯಿಂದ ಸಿ ಟಿ ರವಿಗೆ ಬೆದರಿಕೆ ಪತ್ರ ಬಂದಿದೆ, ಪತ್ರದಲ್ಲಿ ಚಿಕ್ಕಮಗಳೂರಿನಿಂದ ಬೆಳಗಾವಿಗೆ ಬಂದು ಅಭಿನೇತ್ರಿಯ ಕೈ ಕಾಲು ಹಿಡಿದು ಇನ್ನೂ 15 ದಿನದ ಒಳಗೆ ಕ್ಷಮೆ ಕೇಳಬೇಕು ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ಕೈ ಕಾಲು ಮುರಿದು ಸಾಯಿಸುತ್ತೇವೆ ಜೊತೆಗೆ ನಿನ್ನ ಮಗನಿಗೂ ಅಪಾಯವಿದೆ ಹುಷಾರ್.. ಹುಷಾರ್.. ಎಂಬ ಎಚ್ಚರಿಕೆ ಹಾಗೂ ಬೆದರಿಕೆ ಪತ್ರ ಬಂದಿದೆ.
ಸದ್ಯ ಅನಾಮಧೇಯ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆ ಸಿ ಟಿ ರವಿ ನಗರದ ಬಸವನಹಳ್ಳಿ ಠಾಣೆಗೆ ದೂರು ನೀಡಿದ್ದು ಸೂಕ್ತ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಗೆ ಮುಂದಾಗಿದ್ದಾರೆ. ಪೊಲೀಸರ ತನಿಖೆಯ ನಂತರವೇ ಸಿ ಟಿ ರವಿ ಗೆ ಬಂದಿರುವ ಅನಾಮಧೇಯ ಬೆದರಿಕೆ ಪತ್ರದ ಸಂಪೂರ್ಣ ಚಿತ್ರಣ ಹೊರ ಬೀಳಲಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g