ಇನ್ನು ಮುಂದೆ ವಿಡಿಯೋ ಕಾಲ್ ಮೂಲಕವೂ ಅರೆಸ್ಟ್ ಮಾಡಿ ಅಲ್ಲೇ ರಿಲೀಸ್ ಮಾಡಬಹುದು
1 min read
ಸೈಬರ್ ವಂಚಕರ ಹೊಸ ಹೊಸ ಮೋಸದ ಜಾಲಗಳು ದಿನಕ್ಕೊಂದು ರೂಪದಲ್ಲಿ ನಡೆಯುತ್ತಲೇ ಇರುತ್ತವೆ ಇದಕ್ಕೆ ನೂತನ ಸೇರ್ಪಡೆ ಡಿಜಿಟಲ್ ಅರೆಸ್ಟ್, Skype ಮೂಲಕ ವಿಡಿಯೋ ಕಾಲ್ ಮಾಡಿ ಅರೆಸ್ಟ್ ವಾರೆಂಟ್ ತೋರಿಸಿ ಬಂಧಿಸುವ ಬೆದರಿಕೆ ಹಾಕಿ ಲಕ್ಷ ಲಕ್ಷ ಹಣ ಪೀಕಿರುವ ಪ್ರಕರಣ ಬೆಳಕಿಗೆ ಬಂದಿದೆ ವಿಶೇಷ ಎಂದರೆ ಇಲ್ಲಿ ವಂಚನೆಗೆ ಒಳಗಾಗಿರುವವರು ಬ್ಯಾಂಕ್ ನ ಒಬ್ಬ ಅಧಿಕಾರಿ
ನಕಲಿ ಪೊಲೀಸ್, ಸಿಬಿಐ, ಈಡಿ ಎಂದು ರೇಡ್ ಮಾಡಿ ಹಣ ದೋಚುವ ಕಾಲ ಇಂದು ಕಡಿಮೆ ಆಗಿದೆ. ಈಗೇನಿದ್ದರೂ ಡಿಜಿಟಲ್ ಅರೆಸ್ಟ್ ,, ಅಂದರೆ ವಿಡಿಯೋ ಕಾಲ್ ಮೂಲಕ ನಿಮ್ಮನ್ನು ಬಂಧಿಸಿ ಅಲ್ಲೇ ರಿಲೀಸ್ ಕೂಡಾ ಮಾಡಲಾಗುತ್ತದೆ. ಆದರೆ ಹಣ ಕೊಡಬೇಕು ಅಷ್ಟೇ , ಇದು ಆನ್ ಲೈನ್ ವಂಚಕರ ಹೊಸ ಪ್ಲಾನ್ ,
ಘಟನೆ ವಿವರ : ಕೊಪ್ಪ ತಾಲೂಕಿನ ರಾಷ್ಟ್ರೀಯ ಬ್ಯಾಂಕ್ ಒಂದರ ಅಧಿಕಾರಿಗೆ ಕರೆ ಮಾಡಿ ನಾವು ಸಿಬಿಐ ಪೊಲೀಸ್ ಎಂದು ನಂಬಿಸಿ Skype ಮೂಲಕ ವಿಡಿಯೋ ಕಾಲ್ ಮಾಡಿ ನಿಮ್ಮ ಮೇಲೆ ಮನಿ ಲಾಂಡ್ರಿಂಗ್ ಕೇಸ್ ದಾಖಲಾಗಿದೆ ಎಂದು ಎಫ್ಐಆರ್ ತೋರಿಸಿ ಪ್ರಕರಣ ಮುಚ್ಚಿ ಹಾಕಲು ದುಡ್ಡು ಕೊಡಬೇಕು ಎಂದು ಬರೋಬ್ಬರಿ 17 ಲಕ್ಷ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾರೆ.
ಸದ್ಯ ಚಿಕ್ಕಮಗಳೂರು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರೀತಿಯ ವಂಚನೆ ಬಗ್ಗೆ ಜಾಗೃತಿ ವಹಿಸಿ ಎಂದು ಪೊಲೀಸ್ ವರಿಷ್ಟಾಧಿಕಾರಿ ವಿಕ್ರಮ್ ಅಮಟೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಯಾವುದೇ ಹಣ ಆನ್ ಲೈನ್ ಮೂಲಕ ವರ್ಗಾವಣೆ ಆಗಲು(ಲಕ್ಷಕ್ಕೂ ಹೆಚ್ಚು) ಕನಿಷ್ಟ ಒಂದು ದಿನ ಬೇಕು ಹಾಗಾಗಿ ಘಟನೆ ನಡೆದ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದಿದ್ದಾರೆ. ಸೈಬರ್ ವಂಚನೆ ಬಗ್ಗೆ ಟೋಲ್ ಫ್ರೀ ನಂಬರ್ 1930 ಕ್ಕೆ ಕರೆ ಮಾಡಿ ಗೋಲ್ಡನ್ ಹವರ್ ಒಳಗೆ ದೂರು ನೀಡಿದರೆ ನಿಮ್ಮ ಹಣ ವರ್ಗಾವಣೆ ಆಗದಂತೆ ತಡೆಯಬಹುದು ಎಂದಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g