ಕಾಡು ಕೋಣ ದಾಳಿ ವೃದ್ಧ ಸಾವು.
1 min read
ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ 73 ವರ್ಷದ ವೃದ್ಧನ ಮೇಲೆ ಕಾಡುಕೋಣ ದಾಳಿಮಾಡಿದ್ದು ವೃದ್ಧನು ಸ್ಥಳದಲ್ಲೇ ಮರಣ ಹೊಂದಿರುವ ಘಟನೆ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳಸ ತಾಲೂಕಿನ ಹಳುವಳ್ಳಿ ಸಮೀಪದ ಲಲಿತಾದ್ರಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ
73 ವರ್ಷದ ಮೃತ ದುರ್ದೈವಿ ರಘುಪತಿ ಮಧ್ಯಾಹ್ನ ಮನೆಯಿಂದ ಕಾಫಿ ತೋಟಕ್ಕೆ ತೆರಳಿ ಕೆಲಸ ಮಾಡುತ್ತಿರುವ ವೇಳೆಯಲ್ಲಿ ಧೈತ್ಯಾಕಾರದ ಕಾಡುಕೋಣವು ತೋಟದ ಸುತ್ತ 6 ಅಡಿ ಬೇಲಿ ನಿರ್ಮಿಸಿದ್ದರು ಅದನ್ನು ದಾಟಿ ರಘುಪತಿ ಕೆಲಸ ಮಾಡುತ್ತಿರುವ ಸ್ಥಳಕ್ಕೆ ದಾವಿಸಿ ದಾಳಿ ಮಾಡಿದೆ. ದಾಳಿ ಮಾಡಿದ ರಬಸಕ್ಕೆ ಕೃಷಿಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.
ತಡವಾದರೂ ಮನೆಗೆ ಬಾರದ ಕಾರಣ ರಘುಪತಿ ಪೋನ್‌ಗೆ ಕುಂಟುAಬದವರು ಹಾಗೂ ಸ್ಥಳೀಯರು ಕರೆ ಮಾಡಿದ್ದರು. ಎಷ್ಟು ಬಾರಿ ಪ್ರಯತ್ನಿಸಿದರು ಫೋನ್ ರಿಸೀವ್ ಮಾಡದಿರುವುದನ್ನು ಕಂಡು ಗಾಬರಿಗೊಂಡು ತೋಟಕ್ಕೆ ಹುಡುಕಿಕೊಂಡು ಬಂದಾಗ ರಘುಪತಿ ಕಾಡುಕೋಣ ದಾಳಿಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕಾಡುಕೋಣ ರಸ್ತೆಗಳಲ್ಲಿಯೂ ಅಡ್ಡಲಾಗಿ ನಿಂತು ನಿರಂತರ ಹಾವಳಿ ನಡೆಸುತ್ತಿದೆ. ದಾಳಿಯಿಂದ ಬೆಳೆಗಾರರು ಹಾಗೂ ಸ್ಥಳಿಯರು ಕಂಗಾಲಾಗಿ ಹಲವು ಬಾರಿ ಮನವಿ ಮಾಡಿದ್ರು ಯಾವುದೇ ರೀತಿಯ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g