ಕಾಲ್ತುಳಿತದಲ್ಲಿ ಮೃತಪಟ್ಟ ಕುಟುಂಬಗಳ ಶಾಪ ನಿಮಗೆ ತಟ್ಟಲ್ವಾ.? ಸರ್ಕಾರದ ವಿರುದ್ಧ ಸಿ.ಟಿ ರವಿ ಕೆಂಡ
1 min read
ಚಿಕ್ಕಮಗಳೂರು : ನಾನು ಆರ್.ಸಿ.ಬಿ ವಿರುದ್ಧ ಮಾತನಾಡಿಲ್ಲ ಆರ್.ಸಿ.ಬಿಯಲ್ಲಿ ಕನ್ನಡಿಗರು ಎಷ್ಟು ಜನ ಇದ್ದಾರೆ ಅಂತ ಕೇಳಿದ್ದೀನಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಆಟಗಾರರ ಹರಾಜು ಕೂಗಿದ್ದಾರೆ, ಆಡಿದ್ದಾರೆ ‘ದೇ ಆರ್ ಪೈಡ್ ಪ್ಲೇಯರ್ಸ್’ ನಾನು ಕ್ರಿಕೆಟ್ ಪ್ರೇಮಿಯಾಗಿ ಪಂದ್ಯವನ್ನು ನೋಡಿದೆ. ಸಿಕ್ಸ್ ಹೊಡೆದಾಗ ವಿಕೆಟ್ ತೆಗೆದಾಗ ಅವರ ಕೌಶಲ್ಯಕ್ಕೆ ಚಪ್ಪಾಳಿ ಹೊಡೆದಿದ್ದೇನೆ ಎಂದಿರುವ ಅವರು ನನ್ನ ಮಾತಿಗೆ ನಾನು ಬದ್ಧ ಆದರೆ ಈ ಸಾವಿನ ಹೊಣೆ ಹೊರ್ತೀರಾ ಎಂದು ಆಡಳಿತ ಪಕ್ಷವನ್ನು ಪ್ರಶ್ನಿಸಿದ್ದಾರೆ. ರಾಜೀನಾಮೆ ಕೊಟ್ಟು ಮಾತನಾಡಿ, ಇದಕ್ಕೆ ನಿಮ್ಮ ನಿರ್ಲಕ್ಷ್ಯವೇ ಕಾರಣ ಎಂದು ಸರ್ಕಾರದ ವಿರುದ್ಧ ಸಿ.ಟಿ ರವಿ ಕಿಡಿಕಾರಿದ್ದಾರೆ.ವಿಧಾನಸೌಧದ ಮುಂದೆ ಸ್ಟೇಜ್ ನೋಡಿದ್ರೆ ನಿಮ್ಮ ಸರ್ಕಾರದ ಯೋಗ್ಯತೆ ಗೊತ್ತಾಗುತ್ತಿತ್ತು. ಮಕ್ಕಳು-ಮೊಮ್ಮಕ್ಕಳನ್ನ ಕಳ್ಕೊಂಡಿದ್ದರಾಲ್ಲ, ಅವರ ಶಾಪ ನಿಮಗೆ ತಟ್ಟಲ್ವಾ ಎಂದಿರುವ ಅವರು ಪ್ರಯಾಗ್ ರಾಜ್ ನಲ್ಲಿ ನಿತ್ಯ 8-10 ಕೋಟಿ ಜನ ಸೇರಿದ್ರು ಇವರ ಪ್ರಚಾರದ ಹಪಹಪಿತನದಿಂದ ಆದ ಘಟನೆ
ಸಿಎಂ-ಡಿಸಿಎಂ ಅವರ ಜೀವ ತಂದು ಕೊಡ್ತಾರಾ.? ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಎಂದು ಸರ್ಕಾರಕ್ಕೆ ಕಿಡಿಕಾರಿದ್ದಾರೆ. ಇದು ಕ್ರೆಡಿಟ್ ವಾರ್ ಗೆ ಬಲಿಯಾಗಿದ್ದು T20 ವಲ್ಡ್ ಕಪ್ ಗೆದ್ದಾಗ ಮುಂಬೈನಲ್ಲಿ 7-8 ಲಕ್ಷ ಜನ ಸೇರಿದ್ರು ಅವಾಗ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ ಇವರಿಗೆ ಅರ್ಜೆಂಟ್ ಇತ್ತು, 2 ದಿನ ಬಿಟ್ಟು ಮಾಡಬಹುದಿತ್ತು. ಆಟಗಾರರು ನಮ್ಮವರಲ್ಲ, ಫ್ರಾಂಚೈಸಿ ನಮ್ದಳ್ಳ ಮುಖ್ಯಮಂತ್ರಿಗಳು ಮತ್ತೊಬ್ಬರ ಮೇಲೆ ಹೇಳುವಂತಿಲ್ಲ, ಇದಕ್ಕೆ ನೀವೆ ಹೊಣೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಸಿ.ಟಿ ರವಿ ಅಸಮಾಧಾನ ಹೊರ ಹಾಕಿದ್ದಾರೆ. ಅಲ್ಲದೇ ಕಾಗಕ್ಕ-ಗೂಬಕ್ಕನ ಕಥೆ ಹೇಳೋದು ಬೇಡ ಮ್ಯಾಜಿಸ್ಟ್ರೇಟ್ ತನಿಖೆಯೂ ಬೇಡ, ನ್ಯಾಯಾಂಗ ತನಿಖೆ ಆಗಬೇಕು, ಉಚ್ಛ ನ್ಯಾಯಾಲಯದ ಜಡ್ಜ್ ನಿಂದ ತನಿಖೆ ಮಾಡಿಸಿ ಮೃತಪಟ್ಟವರಿಗೆ 25 ಲಕ್ಷ ಪರಿಹಾರ ನೀಡಬೇಕು ಎಂದು ಸಿ.ಟಿ ರವಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g