ಮಳೆ ಹೊಡೆತಕ್ಕೆ ಬಿರುಕು ಬಿಟ್ಟ ರಾಷ್ಟ್ರೀಯ ಹೆದ್ದಾರಿ : ಸಂಚಾರ ದುಸ್ಥರ
1 min readಜಿಲ್ಲೆಯಲ್ಲಿ ಮಳೆಯಾರ್ಭಟಕ್ಕೆ ಹೆಚ್ಚು ಅನಾಹುತಕ್ಕೆ ಒಳಗಾಗುತ್ತಿರುವುದು ರಸ್ತೆಗಳು ! ಮಳೆಯ ಹೊಡೆತಕ್ಕೆ ರಾಷ್ಟ್ರೀಯ ಹೆದ್ದಾರಿಗಳು ಬಿರುಕು ಬಿಡುವಂತಾಗಿವೆ. ಶೃಂಗೇರಿ ತುಂಗಾ ನದಿ ತೀರದಲ್ಲಿ ಹೆದ್ದಾರಿ169 ರಲ್ಲಿ ಕಾಣಿಸಿಕೊಂಡರಿರುವ ಬಿರುಕು ಅಪಾಯಕ್ಕೆ ಹಾದಿ ಮಾಡಿಕೊಟ್ಟಂತಿದೆ.
ಮಲೆನಾಡಿನ ಮಳೆಗೆ ಶೃಂಗೇರಿ ತಾಲೂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಎನ್ ಎಚ್ 169ರಲ್ಲಿ ಸುಮಾರು 50 ಅಡಿಗೂ ಹೆಚ್ಚು ದೂರ ಬಿರುಕು ಬಿಟ್ಟಿದ್ದು ತಾಲೂಕಿನ ನೆಮ್ಮಾರು ಎಸ್ಟೇಟ್ ಬಳಿ ಘಟನೆ ನಡೆದಿದೆ
ತುಂಗಾ ನದಿ ಪಕ್ಕದಲ್ಲೇ ಬಿರುಕು ಬಿಟ್ಟಿದ್ದು ಆತಂಕದಲ್ಲಿ ಪ್ರಯಾಣಿಕರು ಸಂಚರಿಸಬೇಕಾಗಿದೆ. ಶೃಂಗೇರಿ- ಕಾರ್ಕಳ ಪ್ರಮುಖ ಮಾರ್ಗ ಇದಾಗಿದ್ದು ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದು ನೋಡೋದಕ್ಕೆ ಭಯ ಹುಟ್ಟಿಸುವಂತಿದೆ. ಪ್ರತಿನಿತ್ಯ ಹತ್ತಾರು ಬಸ್ ಗಳು ನೂರಾರು ವಾಹನಗಳು ಓಡಾಡುವ ರಸ್ತೆ ಇದಾಗಿದ್ದು ಕಳಪೆ ಕಾಮಗಾರಿಯಿಂದ ಈ ಸ್ಥಿತಿ ಬಂದಿದೆ ಎಂದು ಸ್ಥಳೀಯರು ಆರೋಪಿಸಿದ್ದು ಕಾಮಗಾರಿ ನಡೆಸಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರ್ಷದ ಹಿಂದಷ್ಟೇ ಇದೇ ಜಾಗದಲ್ಲಿ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g