ಕಾರು ಬೈಕ್ ನಡುವೆ ಅಪಘಾತ. ಎರಡು ಗುಂಪುಗಳ ನಡುವೆ ಮಾರಾಮಾರಿ.
1 min read
ಕಾರು ಬೈಕಿಗೆ ಅಪಘಾತವಾದರು ಕಾರು ನಿಲ್ಲಿಸದೇ ಹೋದ ಚಾಲಕನನ್ನು ಅಡ್ಡಗಟ್ಟಿ ಪ್ರಶ್ನಿಸಿದ್ದಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗಿರುವ ಘಟನೆ ಕೊಪ್ಪ ಹಾಗೂ ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉಡುಪಿಯಿಂದ ಕೊಪ್ಪಗೆ ಖಾಸಗಿ ಕಾರ್ಯಕ್ರಮಕ್ಕೆಂದು ಕಾರಿನಲ್ಲಿ ಬಂದಿದ್ದ ಅನ್ಯಕೋಮಿನ ಉಡುಪಿ ಮೂಲದ ಕುಟುಂಬವು, ಕಾರ್ಯಕ್ರಮ ಮುಗಿಸಿ ಉಡುಪಿಗೆ ವಾಪಸ್ ಹೋಗುವಾಗ ಹರಿಹರಪುರ ಬಳಿ ಕಾರು ಹಾಗೂ ಬೈಕಿನ ನಡುವೆ ಸಣ್ಣ ಅಪಘಾತ ಸಂಭವಿಸಿದೆ.
ಕಾರು ಬೈಕಿಗೆ ಡಿಕ್ಕಿಯಾದರೂ ಚಾಲಕನು ಕಾರು ನಿಲ್ಲಿಸದೇ ಹೋಗಿದ್ದು, ಹರಿಹರಪುರ ಹುಡುಗರು ಶೃಂಗೇರಿ ಹುಡುಗರಿಗೆ ಕರೆ ಮೂಲಕ ಮಾಹಿತಿ ತಿಳಿಸಿದ್ದಾರೆ. ನಂತರ ಸ್ಥಳಿಯ ಯುವಕರು ಶೃಂಗೇರಿಯಲ್ಲಿ ಕಾರು ಅಡ್ಡ ಹಾಕಿ ಪ್ರಶ್ನೆ ಮಾಡಿದ್ದು, ಕೇಳಲು ಹೋದ ಶೃಂಗೇರಿ ಯುವಕರು, ಹಾಗೂ ಕಾರಿನಲ್ಲಿದ್ದ ಉಡುಪಿಯವರ ಮಧ್ಯೆ ಗಲಾಟೆ ಶುರುವಾಗಿದೆ.
ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಜೋರಾಗಿ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದು , ಹಲ್ಲೆಗೊಳಗಾದ ಉಡುಪಿ ಮೂಲದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಈ ಪ್ರಕರಣ ಕುರಿತು ಕೊಪ್ಪ ಹಾಗೂ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದ್ದು, ಎಸ್ಪಿ ವಿಕ್ರಂ ಅಮಟೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g