ಎರಡು ದಿನದ ಮಗುವನ್ನ ತೋಟದಲ್ಲಿ ಬಿಟ್ಟು ಹೋದ ಮಹಾ ತಾಯಿ
1 min read
ಚಿಕ್ಕಮಗಳೂರು: ಎರಡು ದಿನದ ಮಗುವನ್ನ ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.
ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಹಸುಕಂದಮನನ್ನು ಹೆತ್ತ ತಾಯಿಯೇ ಬಿಟ್ಟು ಹೋಗಿದ್ದಾಳೆ. ಬೆಳಗ್ಗಿನ ಜಾವ 6ಗಂಟೆಯ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದೆ, ಸ್ವಲ್ಪ ಸಮಯ ಸುಮ್ಮನಾದ ತೋಟದ ಪಕ್ಕದ ಮನೆಯ ಚಂದ್ರಮ್ಮ ಯಾರದೋ ಮಗು ಅಳ್ಳುತ್ತಿರಬೇಕೆಂದು ಸುಮ್ಮನಾಗಿದ್ದಾರೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತನ್ನ ಮಗಳನ್ನು ಕರೆದುಕೊಂಡು ಬಂದು ನೋಡಲು ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಕಂದನನ್ನು ಕಂಡು ಚಂದ್ರಮ್ಮ ಕಣ್ತುಂಬಿಕೊಂಡು ಬಿಟ್ಟು ಹೋದ ಮಹಾತಾಯಿಗೆ ಹಿಡಿ ಶಾಪ ಹಾಕಿ ಮಗುವನ್ನು ಕರೆತಂದು, ತಮ್ಮ ಮನೆಯಲ್ಲಿ ಮಗುವಿಗೆ ಹಾಲು ಕುಡಿಸಿ ಹಾರೈಕೆ ಮಾಡಿದ್ದಾರೆ, ತದನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ, ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಮಯಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮಗುವಿನ ರಕ್ಷಣೆ ಮಾಡಿದ ಚಂದ್ರಮ್ಮ ಕಂದಮ್ಮನ ಪರಿಸ್ಥಿತಿ ನೆನೆದು ಕಣ್ತುಂಬಿಕೊಂಡು ಮಗುವನ್ನ ಅಧಿಕಾರಿಗಳ ಜೊತೆ ಕಳಿಸಿಕೊಟ್ಟಿದ್ದಾರೆ, ವಿಷಯ ತಿಳಿದ ಗ್ರಾಮಸ್ಥರು ಸಾಗರೋಪಾದಿಯಲ್ಲಿ ಚಂದ್ರಮ್ಮ ಮನೆಗೆ ಬಂದು ಮಗುವನ್ನು ನೋಡಿ ಹೆತ್ತು ಬಿಟ್ಟು ಹೋದ ತಾಯಿಗೆ ಹಿಡಿ ಶಾಪ ಹಾಕಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g