ಊರ ಒಳಗೆ ಬಂದ ಕರಡಿ : ರೈತನ ಮೇಲೆ ದಾಳಿ ಆಸ್ಪತ್ರೆಗೆ ದಾಖಲು
1 min read
ಬೆಳ್ಳಂ ಬೆಳಗ್ಗೆ ಕರಡಿಯೊಂದು ದಾಳಿ ನಡೆಸಿ ವ್ಯಕ್ತಿಯೊಬ್ಬರಿಗೆ ಗಾಯ ಗೊಳಿಸಿದೆ. ತರೀಕೆರೆ ತಾಲೂಕಿನ ದುಗ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು ಊರಿನ ಒಳಗೆ ರಸ್ತೆಯಲ್ಲಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಕರಡಿ ಕಂಡು ಜನರು ಆತಂಕಗೊಂಡಿದ್ದಾರೆ
ರೈತ ಸೋಮಶೇಖರಪ್ಪ ಮೇಲೆ ಇಂದು ಏಕಾಏಕಿ ಎರಗಿದ ಕರಡಿ ಕಚ್ಚಿ ಗಾಯಗೊಳಿಸಿದೆ. ಮುಂಜಾನೆ ತಮ್ಮ
ಜಮೀನಿಗೆ ತೆರಳುವಾಗ ಈ ಕರಡಿ ದಾಳಿ ನಡೆಸಿದೆ. ಸ್ವಲ್ಪದರಲ್ಲೇ ರೈತ ಪ್ರಾಣಪಾಯದಿಂದ ಪಾರಾಗಿದ್ದು
ಕಳೆದ 20 ದಿನಗಳಿಂದ ದುಗ್ಲಾಪುರ ಸುತ್ತಮುತ್ತ ಇದೇ ಕರಡಿ ಅಲೆದಾಟ ನಡೆಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ, ನಿತ್ಯ ಪ್ರಾಣ ಭಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಓಡಾಡುವ ಪರಿಸ್ಥಿತಿ ಎದುರಾಗಿದೆ. ತರೀಕೆರೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g