ಚಿಕ್ಕಮಗಳೂರು : ಬಾರ್ ಓಪನ್ ಆದ ಒಂದೇ ವರ್ಷದಲ್ಲಿ ಬಾರ್ ಮುಂದೆಯೇ ಅಪಘಾತದಿಂದ ಏಳಕ್ಕೂ ಜನ ಅಪಘಾತದಿಂದ ಸಾವನ್ನಪ್ಪಿದ್ದಾರೆ. ಕೂಡಲೇ ಬಾರ್ ಬಂದ್ ಮಾಡುವಂತೆ ಸ್ಥಳಿಯರು ಬಾರ್ ಮುಂದೆ ಪ್ರತಿಭಟನೆ ನಡೆಸಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಮೀಪದ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಇದೇ ಬಾರ್ ನಿಂದ ಹೊರ ಬಂದ ಯುವಕರಿಗೆ ಟಿಪ್ಪರ್ ಲಾರಿ ಡಿಕ್ಕಿಯೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದ ಜನ ಕೂಡಲೇ ಬಾರ್ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಇಂದು ಊರಿನ ಜನ ಬಾರ್ ಮುಂದೆ ಪ್ರತಿಭಟನೆ ನಡೆಸಿ ಬಾರ್ ಕ್ಲೋಸ್ ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ, ಬಾರ್ ಮಾಲೀಕರು, ಸ್ಥಳಿಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ. ಸ್ಥಳಕ್ಕೆ ಅಬಕಾರಿ ಇಲಾಖೆ ಹಾಗೂ ಡಿವೈಎಸ್ಪಿ ಭೇಟಿ ನೀಡಿ ಪ್ರತಿಭಟನಾನಿರತರನ್ನ ಸಮಾಧಾನ ಮಾಡಿದ್ದಾರೆ. ಮುಂದಿನ 10 ದಿನಗಳವರೆಗೆ ಬಾರ್ ಓಪನ್ ಮಾಡದಂತೆ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. 10 ದಿನಗಳ ಒಳಗೆ ಬಾರನ್ನ ಸ್ಥಳಾಂತರಿಸುವುದಾಗಿ ಸ್ಥಳಿಯರಿಗೆ ಭರವಸೆ ನೀಡಿದ್ದಾರೆ. ಸ್ಥಳಿಯರು ಕೂಡ ತಾತ್ಕಾಲಿಕವಾಗಿ ಪ್ರತಿಭಟನೆಯನ್ನ ಹಿಂಪಡೆದಿದ್ದಾರೆ. 10 ದಿನಗಳಲ್ಲಿ ಬಾರ್ ಕ್ಲೋಸ್ ಆಗಬೇಕು ಅಥವ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಬಾರ್ ಮತ್ತೆ ಓಪನ್ ಆದರೆ ಹೋರಾಟದ ರೂಪುರೇμÉಯನ್ನ ಬದಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g
More Stories
ಆ ಧೈರ್ಯ ಹಾಗೂ ಶಕ್ತಿ ಯಾರಿಗೂ ಇಲ್ಲ, ವಿಭಜಿಸಲು ಸಾಧ್ಯವಿಲ್ಲ : ಭೈರತಿ ಸುರೇಶ್
ಸೂಲಿಬೆಲೆ ದೇಶಭಕ್ತಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಾಗಿಲ್ಲ
ತೋಟ ಕಾರ್ಮಿಕ ಮಹಿಳೆಯ ಮೇಲೆ ಹುಲಿ ದಾಳಿ