September 29, 2022

MALNAD TV |

HEART OF COFFEE CITY

ಶಾಲೆ ಆರಂಭಿಸುವ ಮುನ್ನ ನಡೆಸಬೇಕಿದೆ ಶಾಲಾ ಕಟ್ಟಡಗಳ ಸಮೀಕ್ಷೆ

 

 

 

 

ಮೂಡಿಗೆರೆ : ಮಲೆನಾಡಿನಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ದೇವರಿಗೆ ಪ್ರೀತಿಯಾಗಬೇಕು. ಏಕೆಂದರೆ ಮಲೆನಾಡಿನ ಒಂದಿಲ್ಲೊಂದು ಶಾಲೆಗಳ ಗೋಡೆ ಕುಸಿತ, ಚಾವಣಿ ಕುಸಿತ. ಇದು ಮಳೆರಾಯನ ಅವಕೃಪೆಯೋ ಅಥವಾ ಅಧಿಕಾರಿಗಳ ನಿರ್ಲಕ್ಷಕ್ಕೆ ಮಳೆಗಾಲ ಒಂದು ಕಾರಣವೋ
ಮೂಡಿಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಕೊಟ್ಟಿದ್ದ ಕಾರಣ ಬಡ ವಿದ್ಯಾರ್ಥಿಗಳ ಜೀವ ಉಳಿದಿದ್ದು, ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಶಾಲೆಯ ಮೇಲ್ಚಾವಣಿ ಕುಸಿತದಿಂದ ಮಳೆಯ ನೀರು ನೇರವಾಗಿ ಶಾಲೆಯ ಕೊಠಡಿಯೊಳಗೆ ನೇರವಾಗಿ ಸುರಿಯುತ್ತಿದೆ. ಮಲೆನಾಡಿನಲ್ಲಿ ನಾಲ್ಕಾರು ಹಳ್ಳಿಗಳಿಗೊಂದು ಸರ್ಕಾರಿ ಕೃಪಾ ಪೋಷಿತ ಶಾಲೆಗಳಿದ್ದು, ಅವುಗಳ ಸ್ಥಿತಿಗಳು ಚಿಂತಾಜನಕವಾಗಿದೆ. ಶಾಲೆ ಆರಂಭವಾಗುವ ಮುನ್ನ ಎಲ್ಲಾ ಸರ್ಕಾರಿ ಶಾಲೆಗಳ ಕಟ್ಟಡಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಶಾಲೆ ಆರಂಭ ಮಾಡಿದರೆ ಒಳಿತು.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

error: Content is protected !!