ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆ ಕುಟುಂಬಕ್ಕೆ 15 ಲಕ್ಷ ಪರಿಹಾರ.
1 min read
https://www.malnadtv.com/wp-content/uploads/2025/02/ioo-2.mp4
ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ಮಿಕ ಮಹಿಳೆಗೆ ಶಾಸಕರಾದ ಟಿಡಿ ರಾಜೇಗೌಡ ಹಾಗೂ ಜಿ ಎಸ್ ಶ್ರೀನಿವಾಸ್ 15 ಲಕ್ಷದ ಪರಿಹಾರ ಚೆಕ್ ವಿತರಿಸಿದರು
ವಿಜಯನಗರ ಜಿಲ್ಲೆ ಹರಪನಹಳ್ಳಿ ಯಿಂದ ಕುಟುಂಬ ಸಮೇತ ಕೂಲಿಗಾಗಿ ವಲಸೆ ಬಂದಿದ್ದ. 39 ವರ್ಷದ ಮೃತ ದುರ್ದೈವಿ ವಿನೋದಾ ಬಾಯಿ ಇಂದು ಬೆಳಗ್ಗೆ ತೋಟಕ್ಕೆ ತೆರಳಿ ಕಾಫಿ ಹಣ್ಣು ಕೊಯ್ಯುವ ಸಂಧರ್ಭದಲ್ಲಿ ಕಾಡಾನೆಯ ಏಕ ಏಕೀ ದಾಳಿಯಿಂದ ಮಹಿಳೆ ಸ್ಥಳದಲ್ಲೇ ಮೃತ ಪಟ್ಟಿದ್ದಳು.
ಈ ಘಟನೆ ಎನ್.ಆರ್.ಪುರ ತಾಲೂಕಿನ ಕತ್ತಲೆಖಾನ್ ನಲ್ಲಿ ನಡೆದಿದಿದ್ದು. ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿಡಿ ರಾಜೇಗೌಡ ಹಾಗೂ ತರಿಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಎಚ್ ಶ್ರೀನಿವಾಸ್ ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಮೃತಳ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರವಾಗಿ 15 ಲಕ್ಷದ ಚೆಕ್ ನೀಡಿದ್ದಾರೆ.
ಈ ಘಟನೆಯು ತಣಿಗೆ ಬಯಲು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದ್ದು. ಕಳೆದ ಎರಡು ತಿಂಗಳಲ್ಲಿ ಕಾಡಾನೆ ದಾಳಿಗೆ ಮೂರು ಜನ ಸಾವನ್ನಪ್ಪಿದ್ದಾರೆ. ಈ ಕುರಿತು ಅಧಿಕಾರಿಗಳು ಹಾಗೂ ಸರ್ಕಾರ ಎಚ್ಚರ ವಹಿಸಿ ಕೂಡಲೇ ಕಾಡಾನೆ ಸ್ಥಳಾಂತರಕ್ಕೆ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g